Big Bulletin | Heavy Rains Create Havoc In Several Parts Of Karnataka | HR Ranganath | July 11, 2022

2022-07-11 22

ರಾಜ್ಯದ ಬಹುತೇಕ ಕಡೆ ಮಳೆ ಅಬ್ಬರಿಸ್ತಿದೆ. ಅದ್ರಲ್ಲೂ ಕಳೆದ 10 ದಿನಗಳಿಂದ ಕರಾವಳಿ ಭಾಗದಲ್ಲಿ ವರುಣ ಆರ್ಭಟಿಸ್ತಿರೋ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಉಡುಪಿಯಲ್ಲಿ ಪಾಪನಾಶಿನಿ ಅಪಾಯದ ಮಟ್ಟ ಮೀರಿ ಹರೀತಿದೆ. ಮಠದ ಕುದ್ರು, ವಿಭುದೇಶ ತೀರ್ಥ ನಗರಕ್ಕೆ ನೀರುನುಗ್ಗಿದೆ. ಮಳೆ ನೀರಲ್ಲಿ ನಾಯಿಗಳು ಪರದಾಡಿವೆ. ಜನ ದೋಣಿ ಅವಲಂಬಿಸಿದ್ದಾರೆ. ಬೆಳ್ಳಾಲ,ನಂದ್ರೊಳ್ಳಿ ಕ್ಷೇತ್ರಪಾಲದಲ್ಲಿ ಮನೆ, ಉಪ್ಪುಂದದಲ್ಲಿ ಶಾಲಾ ಮೇಲ್ಛಾವಣಿ ಕುಸಿದಿವೆ. ದಕ್ಷಿಣ ಕನ್ನಡದ ಮೊಗೆರ್ ಕುದ್ರುನಲ್ಲಿ ನೆರೆ ಇಳಿದಿಲ್ಲ. ಬಟ್ಟಪಾಡಿ ಕಡಲ ತೀರದಲ್ಲಿ ಭಾರೀ ಗಾತ್ರದ ಅಲೆಗಳ ಹೊಡೆತಕ್ಕೆ ರಸ್ತೆ ಕೊಚ್ಚಿಹೋಗಿದೆ. ರಸ್ತೆ ಸಂಪರ್ಕವಿಲ್ಲದೇ 30 ಮನೆಗಳ ಮಂದಿ ಪರದಾಡುವಂತಾಗಿದೆ. ಕಡಲ್ಕೊರೆತದಿಂದ ತತ್ತರಿಸಿರೊ ಕಾಪು ತಾಲೂಕಿನ ಮುಳೂರಿಗೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ರು. ಸಚಿವರು ಬಂದಿರುವ ವಿಚಾರ ತಿಳಿದ ಜನ, ಎದೆ ಮಟ್ಟದ ನೀರಿನಲ್ಲಿ ನಡೆದು ಬಂದರು. ಸಚಿವೆಯೂ ಸ್ಪಂದಿಸಿದ್ರು. ಇನ್ನು, ಬೈತಡ್ಕದ ಹೊಳೆಯಲ್ಲಿ ಕಾರಿನಲ್ಲಿದ್ದವರಿಗಾಗಿ ಶೋಧ ಕಾರ್ಯ ನಡೆದಿದೆ. ಉತ್ತರಕನ್ನಡದ ಹಲವೆಡೆಯೂ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಜೋಯಿಡಾದ ಕಾತೇಲಿ ಕೊಟ್ಟಿಗೆ ಕುಸಿದಿದೆ. ನಿನ್ನೆ ರಾಜ್ಯದ 10 ಕಡೆ ಭಾರೀ ಮಳೆ ಬಿದ್ದಿದೆ. ಸುಬ್ರಹ್ಮಣ್ಯದಲ್ಲಿ 21ಸೆಂ.ಮೀ, ಮುಲ್ಕಿಯಲ್ಲಿ 20 ಸೆಂ.ಮೀ, ಕ್ಯಾಸಲ್ ರಾಕ್‍ನಲ್ಲಿ 19 ಸೆಂ.ಮೀ, ಮೂಡಬಿದ್ರೆ ಮತ್ತು ಬೆಳ್ತಂಗಡಿಯಲ್ಲಿ 18 ಸೆ.ಮೀ, ಧರ್ಮಸ್ಥಳದಲ್ಲಿ 15 ಸೆಂ.ಮೀ ಮಳೆ ಸುರಿದಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿರುವ ಕಾರಣ ರಾಜ್ಯದಲ್ಲಿ ಇನ್ನೂ 5 ದಿನ ಭಾರಿ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ 3 ದಿನ ರೆಡ್ ಅಲರ್ಟ್, ಉತ್ತರ ಒಳನಾಡಿನಲ್ಲಿ 4 ದಿನ ಯಲ್ಲೋ ಅಲರ್ಟ್ ಘೋಷಣೆ ಆಗಿದೆ.

#publictv #bigbulletin #hrranganath

Free Traffic Exchange